Thursday 25 October 2012

ರಾಜಕೀಯ ಬಣ್ಣ ಪಡೆಯುತ್ತಿರುವ ಗಣೇಶೋತ್ಸವ


ಬೆಳ್ತಂಗಡಿ: ಗಣೇಶೋತ್ಸವ ಹೊಲಸು ರಾಜಕೀಯದಿಂದಾಗಿ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ಊರಿಗಂದು ಗಣಪನ ಉತ್ಸವವೀಗ ಗಲ್ಲಿ, ಕೇರಿ ಸ್ವರೂಪ ಪಡೆದು ಹೊಲಸು ರಾಜಕೀಯದ ಬಣ್ಣ ತಗಲಿ ಹಿಂದೂ ಸಂಸ್ಕೃತಿಯನ್ನು ಹಾನಿ ಉಂಟುಮಾಡುತ್ತದೆ ಎಂದು ಸಂಸ್ಕಾರ ಭಾರತಿ ಕನಾðಟಕದ ಉಪಾಧ್ಯಕ್ಷ ಚಕ್ರವತಿð ಸೂಲಿಬೆಲೆ ತಿಳಿಸಿದರು
ಅವರು ಮಡಂತ್ಯಾರಿನ 30ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಧಾðಮಿಕ ಸಭಾ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡುತ್ತಿದ್ದರು
ಬಲಿಷ್ಟ ರಾಷ್ಟ್ರ ನಿಮಾðಣದ ಕನಸು ಹೊತ್ತು ಬಾಲಗಂಗಾದರ ತಿಲಕರು ಗಣೇಶೋತ್ಸವ ಪ್ರಾರಂಭಿಸಿದರು ಆದರೀಗ ಅದು ರಾಜಕೀಯ ಗಾಳಕ್ಕೆ ಸಿಲುಕಿ ಶೋಕಿ ಆಗಿ ಮಪಾðಡಾಗಿದೆ. ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕಿದ್ದ ಉತ್ಸವ ಮೌಲ್ಯ ಕಳೆದುಕೊಂಡು ಪಕ್ಷಗಳ ಗಣಪತಿ ಉತ್ಸವವಾಗಿ ಬದಲಾಗಿದೆ ಎಂದು ತಿಳಿಸಿದರು
ಹಿಂದುತ್ವ ಈಗ ಜೀವಂತವಾಗಿರುವುದ ಇಂತಹ ಉತ್ಸವಗಳಿಂದ ಅದನ್ನು ರಾಜಕೀಯ ಪಿತೂರಿಗೆ ಬಳಸಬಾರದು. ಸ್ವತಂಕ್ಕೆ ಬದುಕು ನಡೆಸದೆ ರಾಷ್ಟ್ರವೇ ದೇವರು ಎಂದು ಭಾವಿಸಿ ರಾಷ್ಟ್ರಿಯತೆ ಒಗ್ಗಟ್ಟಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಜಗತ್ತಿನಲ್ಲಿ ಹೆಚ್ಚು ಕಷ್ಟ ಅನುಭವಿಸಿದ್ದ ದೇಶ ಮತ್ತು ಉನ್ನತ ಸಂಸ್ಕೃತಿಗೆ ಹೆಚ್ಚು ಗೌರವ ಸಂಪಾದಿಸಿದ ರಾಷ್ಟ್ರ ಭಾರತ. ಯಾವುದಕ್ಕೂ ಜಗ್ಗದೆ ಬಲಾಡ್ಯವಾಗಿ ಬೆಳೆಯುತ್ತಿರವ ಅಭಿವೃದ್ಧಿಶೀಲ ರಾಷ್ಟ್ರ ಇದಾಗಿದೆ. ಯುವಕರು ವಿವೇಕಾನಂದರನ್ನು ಮಾದರಿಯನ್ನಾಗಿಸಿಕೊಂದು ದೇಶ ಕಟ್ಟುವ ಕಾಯಕದಲ್ಲಿ ತೊಡಗಬೇಕು ಎಂದು ತಿಳಿಸಿದರು.
ನಮ್ಮ ದೇಶ ಪರಕೀಯರ ಕೈವಶವಾಗುವುದನ್ನ ತಡೆಯಬೇಕು. ಹಿಂದು ಸಂಸ್ಕೃತಿಯನ್ನು ಉಳಿಸಬೆಳೆಸಬೇಕು ಎಂದು ನುಡಿದರು. ನಮ್ಮಲ್ಲಿ ಒಗಟ್ಟು ಪ್ರದಶಿðಸಬೇಕು. ಹೊರಗಿನ ಶಕ್ತಿ ನಮ್ಮನ್ನು ನಾಶಪಡಿಸುವುದಂಕ್ಕಿಂತ ಹೆಚ್ಚಾಗಿ ನಮ್ಮೊಳಗಿನ ಒಳ ಜಗಳ ನಮ್ಮನ್ನು ನಾಶ ಪಡಿಸುತ್ತದೆ. ಭಾರತವನ್ನು ಸಂಸ್ಕೃತಿಯನ್ನು ಉಳಿಸಿಬೇಕಾದರೆ ಮೊದಲು ನಾವು ಸದೃಡರಾಗಬೇಕ, ಹಿಂದೂ ಸಂಘಟನೆಗಳು ಸಂಘ ಪರಿವಾರಗಳು ಈ ಕುರಿತಾಗಿ ಜಾಗೃತಿ ನಡೆಸುತ್ತಿದೆ ಎಂದರು.
ಕನರ್ಾಟಕ ಸರಕಾರ ಹಿಂದುಳಿದ ಆಯೋಗಗಳ ಸದಸ್ಯ ಎಂ ತುಂಬಪ್ಪ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂತಹ ಒಗ್ಗಟ್ಟಿನ ಉತ್ಸವ ಹಿಂದೂ ಸಂಸ್ಕೃತಿಗೆ ಕೈಗನ್ನಡಿ. ಭಾರತೀಯ ಸಂಸ್ಕೃತಿಗೆ ಇದು ಮಾದರಿ ಎಂದರು.
ವೇದಿಕೆಯಲ್ಲಿ ಮಡಂತ್ಯಾರಿನ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ ಪುಜಾರಿ ಕೋಟೆ ಉಪಸ್ಥಿತರಿದ್ದರು.
ಧಾಮಿðಕ ಕ್ಷೇತ್ರಗಳಿಗೆ ನೀಡಿದ ಸೇವೆಗೆ ಮಂಜುನಾಥ್ ಭಟ್ ಅಂತರ ಅವರಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ  ಚಕ್ರವತಿð ಸೂಲಿಬೆಲೆ, ತುಂಗಪ್ಪ ಬಂಗೇರರು ಸನ್ಮಾನಿಸಿದರು
ಸಂಜೀವ ಶೆಟ್ಟಿ ಸ್ವಾಗತಿಸಿದರು. ಪದ್ಮನಾಭ ಸುವರ್ಣ ವಂದಿಸಿದರು ತುಳಸಿ ದಾಸ್ ಪೈ ನಿರೂಪಿಸಿದರು.
  • ಚಂದ್ರಶೇಖರ್ ಅಂತರ

0 comments:

Post a Comment

Share The Posts

Twitter Delicious Facebook Digg Stumbleupon Favorites More