Thursday, 25 October 2012

ಯಕ್ಷ ಪ್ರಿಯರನ್ನು ರಂಜಿಸಿ ಮೋಸಗೊಳಿಸಿದ ಸುಭದ್ರ ಕಲ್ಯಾಣ


ಬೆಳ್ತಂಗಡಿ: ಅದು ಯಕ್ಷ ಪ್ರಿಯರನ್ನು ಕೈ ಬೀಸಿ ಕರೆದ ರಂಗ ಮಂಟಪ. ತಾಳ ಮದ್ದಳೆ ಪ್ರವೀಣರು ಒಂದೆಡೆ ಸಂಗಮಗೊಂಡ ರಂಗಸ್ಥಳ. ಸಭಿಕರ ಮನಸೂರೆಗೈದ ವಾಗ್ಮಿಯರ ವಾಕ್ಚಾತುರ್ಯ, ಹಾಸ್ಯದ ಹೊನಲು ಹರಿಸಿದ ಹಾಸ್ಯಗಾರ, ಹೀಗೆ ತಾಳಮದ್ದಳೆಯು ವಿವಿಧ ಮನೋರಂಜಕ ಅಂಶಗಳನ್ನು ಒಳಗೊಂಡು ವೀಕ್ಷಕರಿಗೆ ರಸದೌತಣ ಉಣಬಡಿಸಿತಾದರೂ ಅದರ ಪೂರ್ಣ ಸವಿಯನ್ನುಣ್ಣಿಸುವಲ್ಲಿ ವಿಫಲವಾಯಿತು.
ಮಡಂತ್ಯಾರು ಸಾರ್ವಜನಿಕ ಗಣೇಶೋತ್ಸವದ ವತಿಯಿಂದ ಯಕ್ಷ ಮಿತ್ರ ಸಂಘ ಸಾದರ ಪಡಿಸಿದ ಯಕ್ಷಗಾನ ತಾಳಮದ್ದಳೆ ಸುಭದ್ರ ಕಲ್ಯಾಣ, ತಾಳಮದ್ದಳೆಯ ಭಾವವನ್ನು ವೀಕ್ಷಕರಲ್ಲಿ ತುಂಬಿತು. ಬಹು ಮುಖವುಳ್ಳ ವಿವಿಧಾರ್ಥ ಕೊಡುವ ಪದ ಪ್ರಯೋಗ, ಅರ್ಥಗಭಿðತ ಅರ್ಥಗಾರಿಕೆ, ಕಂಚಿನ ಸ್ವರದ ಭಾಗವತಿಕೆ ಪ್ರಸಂಗಕ್ಕೆ ರಂಗು ಮಡಿಸಿತು.
ಮಲ್ಪೆ ವಾಸುದೇವ ಸಾಮಗ ಬಲರಾಮನಾಗಿ, ಉಜಿರೆ ಅಶೋಕ್ ಭಟ್ ಶ್ರೀ ಕೃಷ್ಣನಾಗಿ ಸುಣ್ಣಂಬಳ ವಿಶ್ವೇಶ್ವರ್ ಭಟ್ ಅಜುðನನಾಗಿ, ವಾಟೆ ಪಡ್ಪು ವಿಷ್ಣು ಶರ್ಮ ಸುಭದ್ರೆಯಾಗಿ, ರಾಮ ಜೋಯಿಸ್ ಬೆಳ್ಳಾರೆ ವನಪಾಲಕನ ಪಾತ್ರಧಾರಿಯಾಗಿ ಅಭಿನಯಿಸಿ ಮಾತಿನ ಬಾಣಗಳನ್ನು ಪುಂಖಾನುಪುಂಖವಾಗಿ ಎಸೆದು ಮಾತಿನ ಮಂತಪ ನಿಮಿðಸಿ ಜನರ ಮನ ಕಸಿದರು. ವೀಕ್ಷಕರ ಚಪ್ಪಾಳೆ ನಡುವೆ ಪಾತ್ರಧಾರಿಗಳು ಮಿಂಚತೊಡಗಿದರು. ಆದರೆ ಬಹು ನಿರೀಕ್ಷಿತ, ಪ್ರಸಂಗದ ಕೇಂದ್ರಬಿಂದು ಆಗಿರುವ ಕೌರವನ ಪಾತ್ರ ಮಾತ್ರ ಕಣ್ಮರೆಯಾಗಿತ್ತು. ಪಾರ್ಥ ಕೌರವನ ಯುದ್ಧದ ಸನ್ನಿವೇಶ, ಕೃಷ್ಣನ ತಂತ್ರಗಾರಿಕೆ ಸುಭದ್ರೆಯ ಮಂಗಳೋತ್ಸವ ಇವ್ಯಾವುದೂ ಕಾಣಸಿಗದೆ ಪ್ರಸಂಗದ ಕಳೆಗುಂದುವಂತೆ ಮಾಡಿತು. ಪ್ರೇಕ್ಷಕರ ಮೊಗ ಬಾಡಿಸಿತು.
ಪ್ರಸಂಗದ ಪ್ರಮುಖ ಸನ್ನಿವೇಷಗಳನ್ನು ತೋರಿಸದೆ ಅರ್ಧಕ್ಕೆ ತಾಳಮದ್ದಳೆಯನ್ನು ಮೊಟಕುಗೊಳಿಸಿ, ಕಥೆಯನ್ನು ಅxÉÊðಸಿಕೊಳ್ಳ ಬಂದ ಯಕ್ಷಪ್ರಿಯರ ಮನಸ್ಸನ್ನು ಘಾಸಿಗೊಳಿಸಿತು. ಅಜುðನ ಸನ್ಯಾಸಿ ವೇಷದಲ್ಲಿರುವಾಗ ಬಲರಾಮನು ಚಾತುಮಾðಸಕ್ಕೆ ಅಜುð ಕರೆದು ಸುಭದ್ರೆಯನ್ನು ಪಾರ್ಥನ ಸೇವಕಿಯಾಗಿಸುವಲ್ಲಿಗೆ ಕಥೆಯನ್ನು ಮುಕ್ತಾಯಗೊಳಿಸಿ ಪ್ರಸಂಗಕ್ಕೆ ಚ್ಯುತಿ ಉಂಟು ಮಾಡಿದ್ದಲ್ಲದೆ ಪ್ರೇಕ್ಷಕರಲ್ಲಿ ದ್ವಂದ್ವ ವಾತಾವರಣ ಮೂಡಿಸಿ ತಪ್ಪು ಕಲ್ಪನೆಗೆ ಕಾರಣವಾಯಿತು.
ಎರಡು ಗಂಟೆಯಿಂದ ಪ್ರಾರಂಭವಾಗಿ ಆರು ಗಂಟೆ ತನಕ ಸಾಗಿದ ಪ್ರಸಂಗದಲ್ಲಿ ಪಾತ್ರಧಾರಿಗಳು ತನ್ನ ಮಾತುಗಾರಿಕೆಯ ವಿದ್ವತ್ ತೋರಿಸುವಲ್ಲಿ ವಿನಾಃಕಾರಣ ಕಾಲಹರಣ ಮಾಡಿ ಪ್ರಸಂಗ ಪೂರ್ಣಗೊಳಿಸುವಲ್ಲಿ ವಿಫಲರಾದರು. ಕೌರವನಂತಹ ಹಿರದಾದ ಪಾತ್ರ ರಂಗಸ್ಥಳ ಪ್ರವೇಶಿಸದೆ, ಸುಭದ್ರೆಗೆ ಕಲ್ಯಾಣವಾಗದೆ ಪ್ರಸಂಗ ಮುಕ್ತಾಯ ಕಂಡಿತು. ಪಾತ್ರದ ಅಭಿನಯಧಾರಿಗಳು ಸಮಯದ ಇತಿಮತಿ ಅರಿತು ಮಾತಾಡಬೆಕು. ಪ್ರಸಂಗ ಪೂರ್ಣಗೊಳಿಸಬೇಕು. ಪೂರ್ಣ ಪ್ರಸಂಗ ನೋಡ ಬಂದ ಜನರಿಗೆ ಅರ್ಧ ಪ್ರಸಂಗ ತೋರಿಸಿ ತಪ್ಪು ಮಾಹಿತಿ ರವಾನೆಯಾಗದಂತೆ ಜಾಗೃತೆವಹಿಸಿಕೊಳ್ಳಬೇಕಾದ ಅಗತ್ಯತೆ ಮುಮ್ಮೇಳದ ಪಾತ್ರಧಾರಿಗಳದ್ದಾಗಬೇಕು.
ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಶೆಟ್ಟಿ ಪಟ್ಲ ತನ್ನ ಕಂಚಿನ ಸ್ವರ ಹಾಗೂ ವಿವಿಧ ಹಾಡುಗಾರಿಕೆಯ ಶೈಲಿ ಮತ್ತು ಸ್ವರ ಸಂಯೋಜನೆಯಿಂದ ಜನರ ಮನಸೂರೆಗೈದರು. ಚೆಂಡೆ ಹಾಗು ಮದ್ದಳೆ ವಾದಕರಾಗಿ ಪ್ರಶಾಂತ್ ವಗೆನಾಡು. ಗುರುಪ್ರಸಾದ್ ಬೋಳಿಂಜಡ್ಕ ಸಹಕರಿಸಿದರು. ಯುವರಾಜ್ ಆಚಾರ್ಯ ಚಕ್ರತಾಳವಿತ್ತರು.
ಆರಂಭ ಸರಿಯಾಗಿದ್ದರೂ ಅಂತ್ಯ ಸುಂದರವಾಗದೆ ಪ್ರೇಕ್ಷಕರಿಗೆ ನೋವುಂಟು ಮಾಡಿದ್ದು ಹೊರತುಪಡಿಸಿದರೆ, ಈ ಪ್ರಸಂಗ ತಾಳಮದ್ದಳೆಯ ವಿವಿಧ ಆಯಾಮಗಳನ್ನು ಅಚ್ಚುಕಟ್ಟಾಗಿ ತೋರಿಸಿ ಎಲ್ಲರ ಮೆಚ್ಚುಗೆಗ ಪಾತ್ರವಾಯಿತು.
  • ಚಂದ್ರಶೇಖರ್ ಎಸ್ ಅಂತರ

1 comments:

Post a Comment

Share The Posts

Twitter Delicious Facebook Digg Stumbleupon Favorites More