Tuesday, 20 November 2012

ಮಡಂತ್ಯಾರು ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯ


ಬೆಳ್ತಂಗಡಿ: ಬಿ.ಸಿ ರೋಡ್ ಚಾರ್ಮಾಡಿ-234  ರಾಷ್ಟ್ರೀಯ ಹೆದ್ದಾರಿಲ್ಲಿ ಬರುವ ಮಡಂತ್ಯಾರು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ದುರಸ್ತಿ ಕಾರ್ಯ ಆರಂಭವಾಗಿದೆ. ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದರಿಂದ ಸಾರ್ವಜನಿಕರು, ನಾಗರೀಕ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯವರು ಅನೇಕ ಸಲ ವಿವಿಧ ರೂಪದಲ್ಲಿ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದ್ದ ಪರಿಣಾಮವಾಗಿ ರಸ್ತೆ ದುರಸ್ತಿ ಕಾರ್ಯ ಆರಂಭವಾಗಿದೆ.
ಮಳೆಗಾಲ ಮುಗಿದ ನಂತರ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ ಎಂದು ಕಳೆದ ವರ್ಷ ನಡೆದ ಪ್ರತಿಭಟನೆಯ ವೇಳೆ ಭರವಸೆ ನೀಡಿದ್ದ ರಾಷ್ಟ್ರೀಯ ಹೆದ್ದಾರಿಯ ಮಂಗಳೂರು ವಿಭಾಗ ನುಡಿದಂತೆ ಕಾಮಗಾರಿ ಪ್ರಾರಂಭಿಸಿದೆ.
ಬಿ.ಸಿ ರೋಡ್ ಚಾರ್ಮಾಡಿ ರಸ್ತೆ ಕಾಮಗಾರಿ ನಡೆಸುವ ಯೋಜನೆಯಡಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದು ಜನ ಪ್ರತಿನಿಧಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಸಂಪೂರ್ಣ ಹದಗೆಟ್ಟಿದ್ದ ಕೋಲ್ಪೆದಬೈಲು-ಪುಂಜಾಲಕಟ್ಟೆ ರಸ್ತೆಯನ್ನು ಅಗೆದು ಮರು ಡಾಮರೀಕರಣಗೊಳಿಸುವ ಯೋಜನೆ ರೂಪಿಸಲಾಗಿ ರಸ್ತೆ ದುರಸ್ತಿ ಕಾರ್ಯ ಆರಂಭವಾಗಿದೆ.
ರಸ್ತೆಯ ದರಾವಸ್ಥೆಯ ಪರಿಣಾಮವಾಗಿ ಕೆಲ ದಿನಗಳ ಹಿಂದೆ ಚಲಿಸುವ ಬಸ್ಸಿನ ಚಕ್ರಕ್ಕೆ ಜೆಲ್ಲಿ ಕಲ್ಲು ಸಿಲುಕಿ ಹಾರಿ ಮಡಂತ್ಯಾರಿನ ಬಾಳಿಗ ಸ್ಟೋರ್  ಅಂಗಡಿಯ ಶೋಕೇಸ್ಗೆ ತಗಲಿ ಗಾಜು ಚೂರಾದ ಘಟನೆ ಸಂಭವಿಸಿದೆ. ಪಾದಾಚಾರಿಗಳಿಗೂ ಕಲ್ಲಿನ ಏಟುಗಳು ಬೀಳುವ ಸಂಭವವಿದ್ದು ಅತೀ ಶೀಘ್ರದಲ್ಲಿ ದುರಸ್ತಿ ನಡೆಯಬೇಕಿದೆ ಎಂದು ಜನರು ಒತ್ತಾಯಿಸಿದ್ದಾರೆ. ಫೆಬ್ರವರಿಯೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದಿದ್ದ ಹೆದ್ದಾರಿ ಪ್ರಾಧಿಕಾರ ಮಂಗಳೂರು ವಿಭಾಗ ಡಶಂಬರ್-ಜನವರಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆಯಲ್ಲಿದೆ.
  ಮಡಂತ್ಯಾರಿನಲ್ಲಿ ಸದ್ಯಕ್ಕೆ ರಸ್ತೆ ಅಗೆಯಲಾಗುತ್ತಿದ್ದು ಸಂಪೂರ್ಣ ಮಡಂತ್ಯಾರು ಪೇಟೆ ದೂಳು ಮಯವಾಗಿದೆಯಾದರೂ ಜನರಲ್ಲಿ ರಸ್ತೆ ದುರಸ್ತಿಯಗುತ್ತಿರುವ ಸಂತಸವಿದೆ. ಬಿ.ಸಿ ರೋಡ್ ಚಾಮರ್ಾಡಿ ರಸ್ತೆಯಲ್ಲಿ ಸಂಪೂರ್ಣ ಹಡಗೆಟ್ಟ ರಸ್ತೆಗಳಿಗೆ ಮರು ಡಾಮರೀಕರಣ, ಅಲ್ಲಲ್ಲಿ ಸಣ್ಣ ಪುಟ್ಟ ಗುಂಡಿ ಬಿದ್ದ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆಯಲಿದೆ. ರಾಜ್ಕಮಲ್ ಕನ್ಸ್ಟ್ರಾಕ್ಷನ್ಸಸ್ ಮಂಗಳೂರು ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ.
  • ಚಂದ್ರಶೇಖರ್ ಎಸ್  ಅಂತರ

1 comments:

Post a Comment

Share The Posts

Twitter Delicious Facebook Digg Stumbleupon Favorites More