Sunday, 3 February 2013

ಪ್ರಕೃತಿಯ ಮಡಿಲಲ್ಲಿ ತರಗತಿಗಳ ತೋರಣ

ಇನ್ನೇನು ಬೇಸಿಗೆ ಕಾಲ ಪ್ರಾರಂಭವಾಗಲು ದಿನಗಣನೆ ಎನಿಸುತ್ತಿದ್ದೇವೆ. ಸೂರ್ಯನ ಪ್ರಖರ ಶಾಖದಿಂದ ಮೈಯೆಲ್ಲಾ ಬೆವೆತು ಸಾಕಪ್ಪಾ ಸಾಕು ಎನಿಸುವಷ್ಟು ಸೆಕೆಯ ಅನುಭವವಾಗುತ್ತದೆ ಕೆಲವರು ಹವಾ ನಿಯಂತ್ರಿತ ಕೊಠಡಿಯೊಳಗೆ ಕೂರಲು ಮುಂದಾದರೆ ಇನ್ನೂ ಕೆಲವರು ಏ.ಟಿ.ಎಂ ರೂಂ ಹೊಕ್ಕು ಒಂದೈದು ನಿಮಿಷ ತಣ್ಣನೆಯ ಅನುಭವ ಪಡೆದು ವಾಪಸ್ಸಾಗುತ್ತಾರೆ. ಅವರೆಲ್ಲರ ಕಥೆ ಹಾಗೆ ಇರಲಿ ಹೇಗೋ ತಮ್ಮನ್ನು ತಾವು ಸೆಕೆಯಿಂದ ರಕ್ಷಿಸಿಕೊಳ್ಳುತ್ತಾರೆ. ಆದರೆ ವಿದ್ಯಾರ್ಥಿಗಳ ಪಾಡೇನು? ದಿನದ ಹೆಚ್ಚಿನ ಅವಧಿ ತರಗತಿಯಲ್ಲೇ ಕಳೆಯುವ ವಿದ್ಯಾರ್ಥಿಗಳು ಸೆಕೆ ಭಾದೆಗೆ ಸಿಲುಕುತ್ತಾರೆ. ಫ್ಯಾನ್ನನ್ನಾದರೂ ಹಾಕೋಣ ಎಂದರೆ ಕೈ ಕೊಡುವ ವಿದ್ಯುತ್ ಕಥೆ. ಅಂತೂ ವಿದ್ಯಾರ್ಥಿಗಳ ಪಾಡು ಹೇಳಿ ತೀರದು.. ನಿದ್ರಾ ದೇವಿ ಮೈಮೇಲೆ ಆವರಿಸಿಕೊಂಡು ಬಿಡುತ್ತಾಳೆ.
 ಹಮ್... ನಾಲ್ಕು ಗೋಡೆಯ ಮಧ್ಯೆ ನಡೆಸುವ ಕ್ಲಾಸ್ ಎಂಥಾ ಮೇಧಾವಿಗೂ ಬೋರು ಅನಿಸಿಬಿಡುತ್ತದೆ. ಆದರೆ ಪ್ರಕೃತಿ ನಡುವೆ ತರಗತಿಗಳು ನಡೆದರೆ ಹೇಗಿರುತ್ತದೆ? ವಾಹ್ ಎಂಥಾ ಅಲೋಚನೆ ಅಲ್ವ ಅಂಥಹ ಯೋಚನೆಯೇ ಮನಸ್ಸಿಗೆ ಆಹ್ಲಾದಕರ ಭಾವ ಉಂಟು ಮಾಡುತ್ತದೆ. ಮರಗಳ ನಡುವೆ, ಚಿಲಿಪಿಲಿ ಹಕ್ಕಿಗಳ ಕಲರವದೊಂದಿಗೆ ಕೇಳುವ ಪಾಠ ಎಂದೂ ಅಚ್ಚಳಿಯದೆ ಮನಸ್ಸಿನಲ್ಲಿ, ಮಸ್ತಕದಲ್ಲಿ ಬೇರೂರಿಬಿಡುತ್ತದೆ. ಇಂತಹ ಹರ್ಷದ ಸ್ಪರ್ಶ ನೀಡುವ ತರಗತಿಗಳು ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ನಡೆಯುತ್ತಿವೆ. ಮರಗಳ ನಡುವೆ ಹಾಸಿರುವ ಕಲ್ಲು ಬೆಂಚುಗಳ ಮೇಲೆ ಕುಳಿತು ಉಪನ್ಯಾಸ ಕೇಳಬಹುದು.
ಸಾಮಾನ್ಯ ತರಗತಿಗಳಿಗಿಂತ ಇದು ತೀರ ಭಿನ್ನ ಇಲ್ಲಿ ವಿದ್ಯಾಥರ್ಿಗಳಿಗೆ ಬೇಸರ ಎಂಬುದು ಮಾಯ, ಆಕಳಿಕೆಯ ಸುದ್ದಿಯೇ ಇರುವುದಿಲ್ಲ. ತರಗತಿಗೆ ಅಪರೂಪಕ್ಕೆ ಹಾಜರಾಗುವವರು ದಿನಾ ಹಾಜರಾಗುವ ಪ್ರಮೇಯ ಕಾಣಸಿಗುವುದು ಇಲ್ಲಿ ಮಾತ್ರ. ಹಾಗೂ ಒಂದು ವೇಳೆ ಬೇಸರ ಮೂಡಿಸಿದರೆ ಕತ್ತೆತ್ತಿ ಅತ್ತಿತ್ತ ಗಮನ ಕೇಂದ್ರೀಕರಿಸಿದರೆ ಬೇಸರದ ಸುಳಿವೇ ಇರುವುದಿಲ್ಲ. ಅಂದ ಮಾತ್ರಕ್ಕೆ ಪ್ರಕೃತಿ ತರಗತಿ ಮಜಾ ಮಾಡುವ ತಾಣವಲ್ಲ.
ಎಲ್ಲಾ ತರಗತಿಗಳನ್ನೂ ಪ್ರಕೃತಿಯ ಮಡಿಲಲ್ಲಿ ಮಾಡುವುದಕ್ಕೆ ಸಾಧ್ಯವಿಲ್ಲ. ಸಾಧ್ಯವಾಗುವ ಎಲ್ಲಾ ತರಗತಿಗಳನ್ನು ಪ್ರಕೃತಿಯ ಮ,ಡಿಲಲ್ಲಿ ಮಾಡುವುದಕ್ಕೆ ಉಪನ್ಯಾಸಕರು ಹತೊರೆಯುತ್ತಾರೆ. ಅದೆ ಗೋಡೆ, ಕರಿಹಲಗೆ, ನೋಡಿ ನೋಡಿ ಬೇಸತ್ತು ಹೋದ ವಿದ್ಯಾರ್ಥಿಗಳಿಗೆ ಕೈ ಬೀಸಿ ಕರೆಯುತ್ತಿದೆ ಪ್ರಕೃತಿಯ ಮಡಿಳಿನ ತರಗತಿಗಳು. ಗುರುಕುಲ ಶಿಕ್ಷಣದ ಮಾದರಿ ರೀತಿಯಲ್ಲಿ ಈ ಪರಿಸಿರದ ನಡುವಿನ ತರಗತಿಗಳು ನಡೆಯುತ್ತಿವೆ. ಮತ್ತೆ ಘತಕಾಲದ ವೈಭವವನ್ನು ಮರುಕಳಿಸುತ್ತಿದೆ.
ಇಂತಹ ಶಿಕ್ಷಣದ ಮಾದರಿ ವಿದ್ಯಾಥರ್ಿಗಳಿಗೆ ಸಹಕಾರಿ. ಸ್ವಚ್ಛಂದ ಪ್ರಕೃತಿಯ ನಡುವೆ ಪಾಠ ಕೇಳುವುದು ಸಂತಸದ ವಿಚಾರ, ಪರಿಸರ ಪ್ರೇಮವನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಶಿಕ್ಷಣ ಸಹಕಾರಿ ಎನ್ನುತ್ತಾರೆ ವಿದ್ಯಾರ್ಥಿ ಆದರ್ಶ್
ಕಾಂಕ್ರೀಟ್ ಕಾಡಿನೊಳಗೆ ಪಾಠ ಕೇಳುವವರಿಗೂ ಪಾಠ ಮಾಡುವವರಿಗೂ ಪ್ರಕೃತಿ ಮಡಿಲು ಅಚ್ಚರಿ ಜೊತೆಗೆ ವಿಚಿತ್ರ ಅನುಭವ ನೀಡುತ್ತದೆ. ನೆಮ್ಮದಿಯ ಭಾವ ನೀಡುತ್ತದೆ. ಶಿಕ್ಷಕ ವೃತ್ತಿ ಸಾರ್ಥಕ ಭಾವ ನೀಡುತ್ತದೆ. ಖುಷಿಯಿಂದ ಪಾಠ ಮಾಡಲು ಪ್ರಕೃತಿಯ ಮಡಿಲಿನ ಶಿಕ್ಷಣ ಸಹಕಾರಿ. ವಿದ್ಯಾರ್ಥಿಗಳೂ 100 ಶೇಕಡ ಹಾಜರು ಖಚಿತ. ಎನ್ನುತ್ತಾರೆ ಅಧ್ಯಾಪಕ ಸುನಿಲ್
ವಿದ್ಯಾರ್ಥಿಗಳ ಭಾವನೆಗಳ ತಳುಕು, ವಿನೂತನ ಶಿಕ್ಷಣ ಮಾದರಿಯತ್ತ ಬೆಳಕು, ಭಾರತೀಯ ಸಂಸ್ಕೃತಿಯ ಒಳಪು ಹೀಗೆ ವಿವಿಧ ಸ್ತರಗಳ ಪರಿಚಯ ನೀಡುತ್ತಿರುವ ಈ ಪಕೃತಿ ಮಡಿಲಿನ ತರಗತಿಗಳು ಇನ್ನಷ್ಟು ಹೆಚ್ಚಲಿ. ಎಲ್ಲಡೆ ನಡೆಯಲಿ
- ಚಂದ್ರಶೇಖರ್ ಎಸ್ ಅಂತರ 

1 comments:

Post a Comment

Share The Posts

Twitter Delicious Facebook Digg Stumbleupon Favorites More