Tuesday 13 November 2012

ನಾಡಿಗೆ ಸಮೃದ್ಧಿ ತರಲಿ ದೀಪಾವಳಿ


ದೀಪಾವಳಿ ದೇಶದೆಲ್ಲೆಡೆ ಆಚರಿಸಲಾಗುತ್ತಿರುವ ವಿಶೇಷವಾದ ಹಬ್ಬ. ಜಾತಿ, ಮತಗಳ ಬೇಧವಿಲ್ಲದೆ ಒಂದಾಗಿ ಸುಜ್ಞಾನದ ದೀಪ ಹಚ್ಚಿ ಅಂಧಕಾರ ಹೊಗಲಾಡಿಸುವ ಹಬ್ಬ. ದೀಪದಿಂದ ದೀಪವ ಹಚ್ಚಿ, ಪ್ರೀತಿಯಿಂದ ಪ್ರೀತಿಯನ್ನುಗಳಿಸುವ ಪವಿತ್ರ ಸಂಕೇತವೇ ದೀಪಾವಳಿ. ಎಲ್ಲೆಲ್ಲೂ ದೀಪದ ಆವಳಿ ಸೃಷ್ಠಸಿ ಜಗತ್ತೇ ಸುಜ್ಞಾನದ ದೀವಿಗೆ ಕಡೆ ಕೊಂಡೊಯ್ಯುವ ಹಬ್ಬ ದೀಪಾವಳಿ. ಪ್ರೇಮ, ಪ್ರೀತಿಯೆಂಬ ಶುದ್ಧ ಎಣ್ಣೆಯಿಂದ ಹತ್ತಿಸಿದ ಭಕ್ತಿಯೆಂಬ ಜ್ಯೋತಿಯನ್ನು ಪಸರಿಸಿ ಜಗತ್ತಿನೆಲ್ಲಡೆ ಶಾಂತಿ ಸೌಹಾರ್ದತೆಯ ಬೀಜ ಮಂತ್ರವನ್ನು ಮೊಳಗಿಸುವ ಸುಸಂದರ್ಭ.
ದೀಪಾವಳಿ ಒಂದು ಧಾರ್ಮಿಕ  ಹಬ್ಬವೂ ಹೌದು. ಪುರಾಣ ಇತಿಹಾಸ ಮೂಲಕ ದೀಪಕ್ಕೂ ಭಾರತೀಯರಿಗೂ ನಂಟಿದೆ. ಯಾವೂದೇ ಶುಭ ಸಂದರ್ಭದಲ್ಲಿ ಸಮಾರಂಭದಲ್ಲಿ ದೀಪ ಬೆಳಗಿಸುವ ಪದ್ಧತಿ ಭಾರತದಲ್ಲಿದೆ. ಹಾಗಾಗಿ ಭಾರತೀಯರ ಬದುಕಿನಲ್ಲಿ ದೀಪವೇ ಎಲ್ಲ ಆಗಿದೆ. ಮುಂಜಾನೆ ಎದ್ದು ಜಲಕ ಮಾಡಿ ದೇವರಿಗೆ ದೀಪ ಬೆಳಗಿಸಿ ಕಾರ್ಯ ಪ್ರವೃತ್ತರಾಗುತ್ತೇವೆ. ಹಾಗಾಗಿ ದೀಪಕ್ಕೂ ಆಧ್ಯಾತ್ಮ ಲೋಕಕ್ಕೂ ಒಂದು ಸಂಬಂಧವಿದೆ. ಜ್ಯೋತಿಷ್ಯ ಶಾಸ್ತ್ರ ಪ್ರಾರಂಭಗೊಳ್ಳುವುದು ಸೂರ್ಯನಿಂದ. ಸೂರ್ಯ ಜಗತ್ತಿಗೇ ಬೆಳಕು ನೀಡುವ ಶಕ್ತಿ. ಹೀಗೆ ಎಲ್ಲದಕ್ಕೂ ಮೂಲ ಬೆಳಕು. ಬೆಳಕಿಲ್ಲದ ಜೀವನ ಬೇರಿಲ್ಲದ ಮರದಂತೆ. ದೀಪದ ರೂಪದಲ್ಲಿ ಪರಮಾತ್ಮನನ್ನು ಆದಿ ಮಾಯೆ ದುರ್ಗೆಯನ್ನು ಕಾಣುವ ಪ್ರತೀತಿ ಇದೆ. ಹಾಗಾಗಿ ಭಾರತದಲ್ಲಿ ದೀಪಕ್ಕೆ ಜ್ಯೋತಿಗೆ ಹೆಚ್ಚು ಮೌಲ್ಯ. ದೀಪಾವಳ ಹಬ್ಬಕ್ಕೆ ಹೆಚ್ಚಿನ ಪ್ರಾಶಸ್ತ್ಯ.
ಬಲಿವೇಂದ್ರ ಚಕ್ರವರ್ತಿ ತನ್ನ ಊರನ್ನು ವೀಕ್ಷಿಸಲು ಬರುವ ಸಮಯ ದೀಪಾವಳಿ ಎಂದು ಪುರಾಣ ಹೇಳುತ್ತದೆ. ಜನರ ಸುಭೀಕ್ಷೆ ಜೀವನ ಶೈಲಿ, ತನ್ನ ನೆಲ ಜಲವನ್ನು ನೋಡುವ ಸಲುವಾಗಿ ಬಲಿ ಚಕ್ರವರ್ತಿ  ಬರುವ ಹೊತ್ತು ಎಂದು ಹೇಳಲಾಗಿದೆ. ನರಕ ಚತುರ್ದಶಿ ನರಕಾಸುರನ್ನು ವಧೆ ಮಾಡಿದ ಕೃಷ್ಣನ ಕಥೆ ಪೌರಾಣಿಕ ಪುಸ್ತಕಗಳಲ್ಲಿದೆ. ಹಿಗೆ ಅನೇಕ ವಿಚಾರಗಳನ್ನು ಹೊತ್ತು ತರುತ್ತದೆ ದೀಪಾವಳಿ. ಅಂಧಕಾರ, ದುಷ್ಟ ಶಕ್ತಿಗಳನ್ನು ನಿಗ್ರಹಿಸಿ ಶಿಷ್ಟಾಚಾರದ ಬೆಳಕನ್ನು ನೀಡುವ ಹಬ್ಬವಾಗಿದೆ ದೀಪಾವಳಿ.
ದೀಪದ ಬದುಕು ಮತ್ತು ಶಕ್ತಿ ಎಣ್ಣೆ ಮತ್ತು ಬತ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಅದು ತನ್ನ ಜೀವಿತಾವಧಿಯಲ್ಲಿ ಇತರರಿಗೆ ಬೆಳಕಿನ ದಾರಿ ತೋರಿಸುತ್ತದೆ. ಅಂತೆಯೇ ಮನುಷ್ಯರೂ ಕೂಡ ಪರರ ಕಷ್ಟಕ್ಕೆ ಸ್ಪಂದಿಸಬೇಕು. ಅವರ ಜೀವನದಲ್ಲಿ ಬೆಳಕನ್ನು ನೀಡಲು ಪ್ರಯತ್ನಿಸಬೇಕು ಎಂಬುದು ಇದರ ಗೂಡಾರ್ಥ.
ದಿಪಾವಳಿ ಸಮೃದ್ಧಿಯ ಸಂಕೇತ. ಬೆಳಕು ನಿರಾಕಾರವದುದು ಆತ್ಮವೂ ನಿರಾಕಾರವಾದುದು. ಹಿಗೆ ಶ್ರೇಷ್ಠವಾದ ಶಕ್ತಿಗಳಲ್ಲಾ ಕಾಲಾತೀತವಾದುದು ಅದೆಲ್ಲಾ ಅಲೌಕಿಕವಾದುದು. ಅರಿಷಡ್ವರ್ಗಗಳನ್ನು ಮೀರಿ ನಿಂತು ಬೆಳೆದ ಪವಿತ್ರ ಶಕ್ತಿಗಳು. ದೀಪವೂ ಅಷ್ಟೇ ಪವಿತ್ರವಾದ ಒಂದು ಶಕ್ತಿಯಾಗಿದೆ. ಹೀಗೆ ದೀಪದ ಶ್ರೇಷ್ಠತೆಯ ಕುರಿತು ಅನೇಕ ವರ್ಣನೆಗಳಿವೆ.
ದೀಪಾವಳಿಯ ಸಮಯ ಕೃಷಿ ಫಸಲು ಕೊಡುವ, ಭತ್ತ ಕಟಾವಿಗೆ ಸಿದ್ಧವಾದ ಸಮಯ. ಕೃಷ್ಯುತ್ಪನ್ನಗಳನ್ನು ಮಾರಾಟ ಮಾಡಿ ಹಣಗಳಿಸುವ ಯೋಗ್ಯ ಸಮಯ. ಈ ಸಂಧರ್ಭದಲ್ಲಿ ಕೃಷ್ಯುತ್ಪನ್ನಗಳನ್ನುಗಳಿಗೂ ಅಧಿಕ ಬೇಡಿಕೆ ಇರುತ್ತದೆ. ರೈತರಿಗೂ ವ್ಯಾಪಾರಿಗಳಿಗೂ ಸಂಭ್ರಮದ ಕಾಲ. ಎಲ್ಲರ ಮನೆಯಲ್ಲೂ ಲಕ್ಷ್ಮೀ ಕಳೆ ತುಂಬಿ ಸಂಪತ್ಭರಿತವಾಗಿ ಜನರ ಮೊಗದಲ್ಲಿ ಸಂತಸ ನಗೆ ಬೀರುವ ಹೊತ್ತು. ಇವೆಲ್ಲದರ ಪ್ರತಿಬಿಂಬವೇ ದೀಪಾವಳಿ. ಹಣತೆಯನ್ನು ಹಚ್ಚಿ ದೀಪಬೆಳಗಿಸಿ ಕಷ್ಟಗಳೆಲ್ಲಾ ಪರಿಹಾರವಾಯಿತು ಎಂದು ನಾಡ ಜನರು ಸಂಭ್ರಮಿಸುವ ಕಾಲ ಇದು. ಹೀಗೆ ದೀಪಾವಳಿಯನ್ನು ಅನೇಕ ರೀತ ವ್ಯಾಖ್ಯಾನಿಸಬಹುದು.
ನಾಡಿನಲ್ಲಿ ಸುಜ್ಞಾನವಚನ್ನು ಪಸರಿಸುವ ಕಾರ್ಯ ನಮ್ಮಿಂದಾಗಬೆಕಿದೆ. ದೀಪದ ಸಂದೇಶವನ್ನು ತಿಳಿ ಹೇಳುವ ಕೆಲಸವಾಗಬೆಕಿದೆ. ಭ್ರಷ್ಟಾಚಾರ, ಭಯೋತ್ಪಾದನೆ, ಹೀಗೆ ಅನೆಕ ದುಷ್ಟ ಶಕ್ತಿಗಳ ಬೀಡಾಗುತ್ತಿರುವ ನಮ್ಮ ದೇಶವನ್ನು ಸುಜ್ಞಾನದ ದೀಪದ ಬೆಳಕಿನಲ್ಲಿ ಮನ್ನಡೆಸಬೆಕಿದೆ. ಹೆಚ್ಚಾಗುತ್ತಿರುವ ಅಂಧಕಾರವನ್ನು ಹೋಗಲಾಡಿಸಬೆಕಿದೆ. ಈ ದೀಪಾವಳಿ ಸಮಾಜದ ಸಾಸ್ಥ್ಯ ಕಾಪಾಡಿ ಎಲ್ಲರ ಬದುಕಲ್ಲೂ ಸುಜ್ಞಾನದ ದೀಪ ಬೆಳಗಿಸಲಿ. ದೇಶವನ್ನು ಸಮೃದ್ಧಿಗೊಳಸಲಿ ಎಂದು ನಮ್ಮ ಆಶಯವಾಗಿದೆ.
  • ಚಂದ್ರಶೇಖರ್ ಎಸ್ ಅಂತರ

0 comments:

Post a Comment

Share The Posts

Twitter Delicious Facebook Digg Stumbleupon Favorites More