ಸಾವಿರ ಯಕ್ಷಗಾನ ಪುಸ್ತಕಗಳ ಸರದಾರ

ಮಂಜುನಾಥ್ ಭಟ್

ಪ್ರಕೃತಿಯ ಮಡಿಲಲ್ಲಿ ತರಗತಿಗಳ ತೋರಣ;

ವಿದ್ಯಾರ್ಥಿಗಳೂ 100 ಶೇಕಡ ಹಾಜರು ಖಚಿತ

ಮಾಯಾ ಲೋಕದ ಕಿನ್ನರಿ!

ಜಾದೂ ಪ್ರವೀಣೆ ಉಜಿರೆಯ ರಕ್ಷಾ ನಾಯಕ್ .

ಕೃಷಿಗೂ ಬಂತು ವಲಸೆಯ ಖುಷಿ

ಅಡಿಕೆ ತೋಟದಲ್ಲಿ ವಲಸೆ ಕಾರ್ಮಿಕರು

ಜಾತ್ರೆಯ ಜಂಗುಳಿಯೊಳಗೆ.....!

ತುಳು ನಾಡ ಸಂಸ್ಕೃತಿ ಬಿಂಬಿಸುವ ಜಾತ್ರ್ಯೋತ್ಸವ

Tuesday, 18 December 2012

ಕ್ರಿಯಾಶೀಲ ವಿಕಸನಕ್ಕೊಂದು ವೇದಿಕೆ


 ಕಾಲೇಜು ಅಂಗಳದಲ್ಲಿ ರಂಗ ತರಬೇತಿ 
 ಕಾಲೇಜು ಕೇವಲ ನಾಲ್ಕು ಗೋಡೆಯ ಉಪನ್ಯಾಸವಲ್ಲ. ಬದಲಾಗಿ ವಿಧ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ವೇದಿಕೆ. ಕಲಿಕೆಯ ಜೊತೆ ವಿಧ್ಯಾರ್ಥಿಗಳ ಕ್ರಿಯಾಶೀಲತೆಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತಿದೆ. ಕಲೆಗೆ ತಕ್ಕ ಬೆಲೆ ಸಿಗುತ್ತಿದೆ. ಪಠ್ಯ ಕಲಿಕೆಯ ಜೊತೆ ವಿಧ್ಯಾರ್ಥಿಗಳ ಕ್ರಿಯಾಶೀಲ ಅಭಿವೃದ್ಧಿಗೆ ಪ್ರಾಶಸ್ತ್ಯ ದೊರೆತರೆ ಶಿಕ್ಷಣದ ಉದ್ದೇಶ ಸಾರ್ಥಕ.
ಮಂಗಳೂರು ವಿ.ವಿ ವ್ಯಾಪ್ತಿಯ ಕಾಲೇಜುಗಳಲ್ಲೂ ವಿಧ್ಯಾರ್ಥಿಗಳ ಸರ್ವತೋಮುಖ ಅಭಿವರದ್ಧಿಗೆ ಅವಕಾಶ ಕಲ್ಪಿಸುವ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ವಿಧ್ಯಾರ್ಥಿಗಳ ಶಿಕ್ಷಣದ ಜತೆ ವ್ಯಕ್ತಿತ್ವ ವಿಕಸನಕ್ಕೆ ಹೊಸ ರೂಪ ನೀಡುವ ರಂಗ ತರಬೇತಿ ಕೇಂದ್ರಗಳು ಈ ನಿಟ್ಟಿನಲ್ಲಿ ಹೊಸ ಬೆಳವಣಿಗೆ. ಕರಾವಳಿಯ ಒಂಡೆರಡು ಕಾಲೇಜುಗಳು ಮಾತ್ರ ರಂಗ ತರಬೇತಿಗೆ ಮಹತ್ವ ನೀಡುತ್ತಿದ್ದವು. ಆದರೆ ಇತ್ತೀಚಿಗೆ ಕರಾವಳಿಯ ಬಹತೇಕ ಕಾಲೇಜುಗಳಲ್ಲಿ ತಂಗ ಚಟುವಟಿಕೆ ಗರಿಗೆದರುತ್ತಿರುವುದು ಶುಭ ಸಂಕೇತ.
ರಂಗ ಶಿಕ್ಷಣ ವಿಧ್ಯಾರ್ಥಿಗಳ  ಕಲಿಕೆಯ ಜೊತೆಜೊತೆಗೆ ನಡೆಸಲಾಗುತ್ತಿದೆ. ಕಾಲೇಜಿನ ಸಮಯಕ್ಕೆ ಸರಿ ಹೊಂದುವಂತೆ ವಿಧ್ಯಾರ್ಥಿಗಳಿಗೆ  ತಂದರೆಯಾಗದಂತೆ ರಂಗ ಶಿಕ್ಷಣವನ್ನು ನೀಡಲಾಗುತ್ತಿದೆ. ಆಸಕ್ತರು ರಂಗ ತರಬೇತಿ ಪಡೆಯಬಹುದು. ರಂಗ ಶಿಕ್ಷಣ ಅನೇಕ ರೀತಿಯಲ್ಲಿ ಸಹಕಾರಿಯಾಗಿದೆ. ವೇದಿಕೆ ಏರಲು ನಡುಗುವ ವಿಧ್ಯಾರ್ಥಿಗಳು  ಸಾವಿರಾರು ಪ್ರೇಕ್ಷಕರ ಎದುರು ನಿಂತು ನಿರರ್ಗಳವಾಗಿ ಮಾತನಾಡುವ ಛಾತಿಯನ್ನು ರಂಗ ಶಿಕ್ಷಣ ಬೆಳೆಸಬಲ್ಲುದು. ನಾಚಿಕೆ, ಅಂಜಿಕೆ ಸ್ವಭಾವದ ವಿಧ್ಯಾರ್ಥಿಳು ರಂಗ ಶಿಕ್ಷಣ ಪಡೆದು ಬಳಿಕ ಅಚ್ಚರಿ ಪಡುವಷ್ಟು ಬದಲಾದ ಅನೇಕ ಉದಾಹರಣೆಗಳಿವೆ.
ರಂಗ ಶಿಕ್ಷಣ ಸಾಮಾನ್ಯವಾಗಿ ಅಭಿನಯ ಕಲೆಯನ್ನು ಮಾತ್ರ ನೀಡುತ್ತದೆ ಎಂದು ಭಾವನೆ ಇದೆ. ಆದರೆ ಒಮ್ಮೆ ರಂಗ ತರಬೇತಿ ಕೇಂದ್ರಕ್ಕೆ ಭೇಟಿ ನೀಡದರೆ ಅಲ್ಲಿಯ ಕಲಿಯೆಯ ದರ್ಶನವಾಗುತ್ತದೆ. ಅಭಿನಯ ಜೊತೆಗೆ ಇನ್ನೊಬ್ಬರಲ್ಲಿ ಹೇಗೆ ವರ್ತಿಸಬೇಕು, ಮಾತನಾಡಬೇಕು. ಹೇಗೆ ಗೌರವಿಸಬೇಕು ಎಂಬುದನ್ನು ರಂಗ ಶಿಕ್ಷಣ ಕಲಿಸುತ್ತದೆ. ಸಣ್ಣ ದನಿಯಲ್ಲಿ ಮಾತನಾಡುವವರು ತೆರೆಯ ಮೇಲೆ ನಿಂತಾಗ ಮೈಕ್ ಇಲ್ಲದೆ ಸಭಾಂಗಣದ ಕೊನೆಯಲ್ಲಿ ಕೂತವರಿಗೂ ಕೇಳುವಷ್ಟು ಧ್ವನಿ ಹೇಗೆ ಬರಿಸುವುದು ಎಂದು ರಂಗ ಶಿಕ್ಷಣ ಕಲಿಸುತ್ತದೆ. ಇದರ ಪರಣಾಮ, ಅಂದು ವೇದಿಕೆ ಹತ್ತಲು ಹೆದರುತ್ತಿದ್ದವರು, ಪ್ರೇಕ್ಷಕರ ಮುಂದೆ ನೆಗೆಪಾಟಲಿಗೀಡಾದವರು ಇಂದು ಅಷ್ಟು ಚೆನ್ನಾಗಿ ಮಾತಾಡ್ತಾರೆ ಅವರೇನಾ ಇವರು ಎಂದು ಕೇಳುವಷ್ಟು ಬದಲಾಗಿದ್ದಾರೆ.
ವಿಧ್ಯಾರ್ಥಿ  ಕಲಾವಿದರು ಯಾವ ವೃತ್ತಿ ಪರ ರಂಗ ಭೂಮಿ ಕಲಾವಿದರಿಗೂಗೂ ಕಡಿಮೆ ಇಲ್ಲದಂತೆ ತಮ್ಮನ್ನು ತಾವು ತೆರೆಯ ಮೇಲೆ ತೆರೆದುಕೊಳ್ಳುತ್ತಿದ್ದಾರೆ ಎಂದು ಇತ್ತೀಚಿಗೆ ಮಂಗಳೂರು ವಿ.ವಿ ಅಂತರ್ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ ಗೆಳೆಯರೊಬ್ಬರು ಉದ್ಘರಿಸಿದರು.
ವಿಧ್ಯಾರ್ಥಿಗಳು ಕೇವಲ ಪುಸ್ತಕದ ಹುಳುವಾಗಬಾರದು ಕ್ರಿಯಾತ್ಮಕತೆ ಎಂಬ ಶಾಲೆಯ ಕಾಗುಣಿತ ವಿದ್ಯಾಥರ್ಿಗಳು ಅರಿತಿರಬೇಕು. ಕೇವಲ ಪುಸ್ತಕ ಜ್ಞಾನವಿದ್ದರೆ ಸಾಲಲ್ಲ್ಲ. ಕ್ರಿಯಾತ್ಮಕತೆಯ ಗುಣಗಳು ವಿಧ್ಯಾರ್ಥಿಗಳಲ್ಲಿರಬೇಕಾದುದು ಕಾಲದ ಬೇಡಿಕೆ. ಹಾಗಾಗಿ ಕಾಲೇಜು ರಂಗ ತರಬೇತಿ ಕೇಂದ್ರಗಳೂ ವಿಧ್ಯಾರ್ಥಿಗಳ  ಕ್ರಿಯಾತ್ಮಕತೆಯನ್ನು ಪೋಷಿಸುವ ವೇದಿಕೆಯಾಗಿದೆ. ಬಿಡುವಿಲ್ಲದ ಶಿಕ್ಷಣ ಈಗಿನದು. ಆಯಾಸಗೊಂಡು ರಂಗ ತರಬೇತಿ ಕೇಂದ್ರಕ್ಕೆ ಬರುವ ವಿಧ್ಯಾರ್ಥಿಗಳಿಗೆ ಉಲ್ಲಾಸಗೊಳಿಸುವ ಕೆಲಸ ಮೊದಲು ಮಾಡುತ್ತೇವೆ ಎನ್ನುತ್ತಾರೆ ಉಜಿರೆ ಎಸ್.ಡಿ.ಎಂ ಕಾಲೇಜಿನ ರಂಗ ತರಬೇತುದಾರೆ ಗೀತಾ ಸುಲ್ಯ. 
ನಾನು ಕಾಲೇಜಿಗೆ ಬಂದಾಗ ಹಿಂಜರಿಕೆ ಸ್ವಭಾವದವಳಗಿದ್ದೆ. ಪುಸ್ತಕದ ಹುಳುವಾಗಿದ್ದೆ. ಹೊರಗಿನ ಪ್ರಂಪಂಚದ ಜ್ಞಾನ ಅಷ್ಟಕಷ್ಟೇ ಇತ್ತು. ರಂಗ ತರಬೇತು ಕೇಂದ್ರಕ್ಕೆ ಹೋದ ನಂತರ ಎಲ್ಲವೂ ಬದಲಾಯ್ತು. ಹಲವಾರು ನಾಟಕದಲ್ಲಿ ಭಾಗವಹಿಸಿದ್ದೇನೆ. ಖುಷಿಯಾಗಿದ್ದೇನೆ ಎನ್ನುತ್ತಾರೆ ಎಸ್.ಡಿ.ಎಂ ಕಾಲೇಜು ವಿಧ್ಯಾರ್ಥಿನಿ ಸಂಧ್ಯಾ ಶೆಣೈ.
ಶೈಕ್ಷಣಿಕ ಚಟುವಟಿಕೆಗಳಿಂದ ಪ್ರತ್ಯೇಕವಾಗಿಸ ರಂಗ ಶಿಕ್ಷಣ ನೀಡುತ್ತಿರುವದರಿಂದ ಹಲವಾರು ಸಮಸ್ಯೆಗಳು ಆಗುತ್ತಿದೆ. ಸೆಮಿಸ್ಟರ್ ಪದ್ಧತಿ ಈಗಿನ ಕಾಲೇಜು ಶಿಕ್ಷಣವಾಗಿರುವುದರಿಂದ ಯುದ್ಧಕಾಲೇ ಶಸ್ತ್ರಭ್ಯಾಸ ಎನ್ನುವಂತಾಗಿದೆ ರಂಗ ಶಿಕ್ಷಣ. ಪಠ್ಯ ಚಟುವಟಿಕೆಗಳ ಜೊತೆ ರಂಗ ಶಿಕ್ಷಣ ಸೇರಿಸಬೇಕೆಂದು ಒತ್ತಾಯ ಮಾಡಿ ಸಾಕಾಗಿದೆ. ನಮ್ಮ ಕೂಗು ಯಾರಿಗೂ ಕೇಳದಾಗಿದೆ ಎನ್ನುತ್ತಾರೆ ರಂಗ ತರಬೇತುದಾರರೊಬ್ಬುರು.
ಕಾಲೇಜಿನಲ್ಲಿ ರಂಗ ತರಬೇತು ಪಡೆದು ವೃತ್ತಿಪರ ಅಭಿನಯದತ್ತ ಒಲವು ತೋರಿಸಿದ ದೃಷ್ಟಾಂತಗಳೂ ಇವೆ. ಮೈಸೂರು-ಧಾರವಾಡದ ರಂಗಾಯಣ, ಹೆಗ್ಗೋಡಿನ ನೀನಾಸಂನವರು ಆಸಕ್ತರನ್ನು ಕೈಬೀಸಿ ಕರೆಯುತ್ತಿದೆ. ರಂಗಾಸಕ್ತರನ್ನು ಬೆಳೆಸುತ್ತಿದೆ ಪೋಷಿಸುತ್ತಿದೆ. ಹವ್ಯಾಸಿ ರಂಗಭೂಮಿಯಲ್ಲಿ ಅದೆಷ್ಟೋ ಯುವಜನರು ಆಕರ್ಷಿತರಾಗಿದ್ದಾರೆ. ಇವರೆಲ್ಲರ ಆಸಕ್ತಿಗೆ ಮೂಲ ಕಾಲೇಜು ರಂಗಭೂಮಿ. ಈ ಕಾಲೇಜು ರಂಗ ಭೂಮಿ ಶಿಕ್ಷಣವನ್ನು ಪಠ್ಯದ ಜೊತೆ ಸೇರಿಸಿ ಪ್ರತಿಯೊಬ್ಬ ವಿಧ್ಯರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಬೇಕಿದೆ.
 - ಚಂದ್ರಶೇಖರ್ ಎಸ್ ಅಂತರ 

Saturday, 1 December 2012

ಇವರು ಜೋಕರ್ ಅಲ್ಲ!


ಆಳ್ವಾಸ್ ನುಡಿಸಿರ ವಿವಿಧ ಆಕರ್ಷಣೆಯ ಕೇಂದ್ರಬಿಂದು. ನುಡಿಸಿರಿಯ ಛಾವಡಿಯ ಒಳ ಪ್ರವೇಶ ಧ್ವಾರದಿಂದ ಪ್ರಾರಂಭಿಸಿ ಎಲ್ಲಿನೋಡಿದರಲ್ಲಿ ಕಣ್ಣಿಗೆ ಹಬ್ಬ ಕೊಡುವುದು ಭಿನ್ನತೆ. ಅದೇ ನುಡಿಸಿರಿಯ ಐಸಿರಿ. ಈ ಸಲದ ನಡಿಸಿರಯಲ್ಲೂ ಭಿನ್ನತೆ ಛಾವಡಿಯ ಬಾಗಿಲಲ್ಲೇ ಸ್ವಾಗತಿಸುತಿತ್ತು. ವೈಶಿಷ್ಟ್ಯಕ್ಕೆ ಹೆಸರು ಪಡೆದಿತ್ತು. ನುಡಿಸಿರಿಯ ಗತ್ತಿಗೆ ಕಲಶವಾಗಿ ಕೊಡಿ ಏರಿತ್ತು. ಹೌದು ಸಾವಿರಾರು ಜನರ ಆಕರ್ಷಣೆಯ ಕೇಂದ್ರಬಿಂದು ನುಡಿಸಿರಿಯ ಛಾವಡಿಯಾಗಿತ್ತು. ಅದಕ್ಕೆಲ್ಲಾ ಕಾರಣ ನುಡಿಸಿರಿಯ ಗತ್ತಿನ ನಾಯಕ.
ಆಳ್ವಾಸ್ ನುಡಿಸಿರಿ ಆಳ್ವಾಸ್ ವಿರಾಸತ್ ಹೀಗೆ ಆಳ್ವಾಸ್ನ ಹಬ್ಬ ಬಂದರೆ ಸಾಕು ಅಲ್ಲಿಯ ಹಬ್ಬಕ್ಕೆ ಮೆರುಗು ನೀಡಿ ಹಬ್ಬದ ಖುಷಿ ಇನ್ನಷ್ಟು ಹೆಚ್ಚಿಸಲು ಜೋಕರ್ನಂತೆ ಕಾಣುವ ಒಬ್ಬ ವ್ಯಕ್ತಿಯ ಆಗಮನವಾಗಲೇ ಬೇಕು. ಅವರು ಬೇರ್ಯಾರೂ ಅಲ್ಲ ಮಡಬಿದಿರೆಯ ಆಳ್ವಾಸ್ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ 52 ಹರೆಯದ ರಾಧಾಕೃಷ್ಣ ನಾಯ್ಕ್. ತನ್ನ ಅಜಾನುಬಾಹು ದೇಹ, ವಿಚಿತ್ರ ವೈಖರಿ, ಎಲ್ಲರನ್ನೂ ತನ್ನತ್ತ ಸೆಳೆಯುವ ನಗು ಮುಖ ಎಲ್ಲವೂ ಜನರನ್ನು ಕ್ಷಣ ಮಾತ್ರದಲ್ಲಿ ಸೆಳೆದು ಅಲ್ಲೇ ಗುಂಪುಗಟ್ಟಿ ಮಿರಿಮಿರಿ ನೋಡುವಂತೆ ಮಾಡುತ್ತದೆ.
ದುಂಡಗಿನ ಟೋಪಿ, ಕಪ್ಪನೆಯ ಕೋಲಿಂಗ್ ಗ್ಲಾಸ್, ತಲೆ ಸುತ್ತಾ ಪಟ್ಟಿ, ಉದ್ದ ಕೂದಲು, ಆಕರ್ಷಕ ಕರ್ಣಕುಂಡಲ ಫ್ರೆಂಚ್ ಗಡ್ಡ, ಕೈಗ್ಲೌಸ್ ಹೀಗೆ ಚಿತ್ರ ವಿಚಿತ್ರ ವೇಷಭೂಷಣಗಳಂದಿಗೆ ಸೆಕ್ಯೂರಿಟಿ ಗಾರ್ಡ್ ಧಿರಿಸು ಧರಿಸಿ ನನ್ನ ಸ್ಟೈಲು ಬೇರೇನೇ, ನನ್ನ ಲುಕ್ಕು ಬೇರೇನೆ, ಎಂದು ಹಾಡಿ ನಗಿಸುವ ಇವರ ಬದುಕಲ್ಲಿ ದುಖ:ದ ಕಾಮರ್ೋಡವಿದೆ. 
ರಾಧಾಕೃಷ್ಣ ನಾಯ್ಕ್ ಅವರ ಉಪನಾಮ ಆರ್.ಕೆ. ನಾಯಕ್. ಮೂಲತಃ ಅವರು ಕಾರ್ಕಳದ ಬಂಗ್ಲೆಗುಡ್ಡೆಯವರು. ಕೆಲ ವರ್ಷಗಳ ಹಿಂದೆ ಹೈದರಬಾದ್ನ ಹೋಟೇಲ್ ಒಂದರಲ್ಲಿ ಅವರ ದುಡಿಮೆಯಾಗಿತ್ತು. ಅದೇ ಸಂದರ್ಭದಲ್ಲಿ ಕೆಲ ಸಿನಿಮಾಗಳಲ್ಲಿ ಖಳನಾಯಕನ ಪಾತ್ರಕ್ಕೆ ಸಹಾಯಕ ಪಾತ್ರಧಾರಿಯಾಗಿ ನಟಿಸಿದ್ದರು. ದುರಾದೃಷ್ಟವಶಾತ್ ಖಳನಾಯಕನ ಪಾತ್ರಕ್ಕೆ ಬೇಕಾದ ಸಾಹಸ ದೃಶ್ಯದ ತರಬೇತಿ ವೇಳೆ ಬಿದ್ದು ಪೆಟ್ಟಾಗಿ ಸಿನಿಮಾ, ಹೋಟೇಲ್ ದುಡಿಮೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಉಂಟಾಗಿ ಮತ್ತೆ ಊರಿಗೆ ವಾಪಸ್ಸಾಗಬೇಕಾದ ಅನಿವಾರ್ಯತೆ ಅವರದ್ದಾಗಿತ್ತು. ಇಷ್ಟಾದರೂ ಛಲದಂಕಮಲ್ಲರಾಗಿದ್ದ ಅವರು ಊರಿಗೆ ಹಿಂತಿರುಗಿ ಸಣ್ಣ ಹೋಟೇಲು ಉದ್ಯಮ ಪ್ರಾರಂಭಿಸಿದರು. ಆದರೆ ಅದರಲ್ಲಿ ಯಶ ಕಾಣದೆ ಸೋತರು. ಬಳಿಕ ಆಳ್ವರ ಕೃಪಾಕಟಾಕ್ಷ ಅವರಿಗೆ ದೊರೆಯುವ ಕಾಲ ಬಂದೊದಗಿ ಆಳ್ವಾಸ್ ಆಸ್ಪತ್ರೆಯ ಸೆಕ್ಯೂರಿಟಿ ಗಾಡರ್್ ಆಗಿ ಸೇರಿಕೊಂಡರು. ಅಲ್ಲಿಂದ ಇವರ ದೆಸೆಯ ದಿಕ್ಕು ಬದಲಾಯಿತು. ಅದೃಷ್ಟ ಇವರನ್ನು ಅರಸಿ ಬಂದಿತ್ತು.
ಗಾರ್ಡ್ ಆಗಿ ಆಳ್ವಾಸ್ ಆಸ್ಪತ್ರೆ ಸೇರಿ ಒಂದು ವರ್ಷದಲ್ಲಿ ಆರ್.ಕೆ. ನಾಯ್ಕ್ರ ಬದುಕು ಬದಲಾಯಿತು. ಕಹಿ ಕ್ಷಣಗಳು ಸಿಹಿಯಾದವು. ಅವರ ಅಪರೂಪದ ವೇಷಭೂಷಣಗಳಿಂದ ಹೈದರಾಬಾದ್ ಸ್ಟೈಲ್ ಗಾರ್ಡ್ ಆದರು. ಸುಮಾರು 15 ಭಾಷೆಗಳು ಅವರಿಗೆ ಕರತಲಾಮಲಕ. ಹೀಗೆ ವಿಶೇಷತೆಯ ಸಾಗರವಾಗಿರುವ ಇವರು ಸುಮಾರು 20 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಫೋಟೋ ಕ್ಲಿಕ್ಕಿಸಿಕಂಡು ಆನಂದ ಪಟ್ಟಿದ್ದಾರೆ. ಆಳ್ವರ ಕಾರ್ಯಕ್ರಮಗಳಲ್ಲಿ ಕಾಣಸಿಗುವ ಇವರ ಮುಖ ಸುಮಾರು 20 ಸಾವಿರಕ್ಕೂ ಅಧಿಕ ಫೋಟೋಗಳಲ್ಲಿ ಪ್ರತಿರೂಪಗೊಂಡಿದೆ.
'ನನ್ನನ್ನು ನೋಡಲು ಪುಟ್ಟ ಮಕ್ಕಳಿಗೆ ಭಯವಾಗುತ್ತದೆ. ಕೆಲ ಮಕ್ಕಳು ಹತ್ತಿರ ಸುಳಿದಾಡಲೂ ಭಯ ಪಡುತ್ತಾರೆ. ಭಯದಿಂದಲೇ ಕೆಲ ಪುಟಾಣಿಗಳು ಫೋಟೋ ಕ್ಲ್ಲಿಕ್ಕಿಸಿಕೊಂಡದ್ದುಂಟು. ಜನರಿಗೆ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳುವುದೆಂದರೆ ಸಂತಸ. ನಾನೂ ಅವರ ಆಸೆಗೆ ತನ್ನೀರು ಎರೆಚಿಲ್ಲ. ಬಂದು ಬಂದು ಫೋಟೋ ತೆಗೆಸಿಕೊಂಡು ಹೋಗುತ್ತಾರೆ. ನನಗೂ ಭಾರೀ ಬೇಡಿಕೆ ಇದೆ. ಆದರೆ ನಾನು ಯಾವುದೇ ಹಣ ಅಪೇಕ್ಷಿಸುವಿದಿಲ್ಲ. ಕೊಟ್ಟರೆ ತೆಗೆದುಕೊಳ್ಳುತ್ತೇನೆ. ಅಂತೂ ಅವರ ಸಂತಸದಲ್ಲಿ ನಾನೂ ಒಬ್ಬ ಭಾಗಿಧಾರನಾಗಿರುತ್ತೇನೆ' ಎನ್ನುತ್ತಾರೆ ಆರ್.ಕೆ. ನಾಯ್ಕ್
ನೋಡಲು ಅಜಾನುಬಾಹು ಆಗಿದ್ದರೂ ಆರ್.ಕೆ ನಾಯಕ್ ಮೃದು ಸ್ವಭಾವಿ. ಮೋಹನ್ ಆಳ್ವರ ಆಶ್ರಯ ಪಡೆದಿರುವ ಇವರು ಅವರ ಒಪ್ಪಗೆ ಇಲ್ಲದೆ ಇತರ ಯಾವುದೇ ಕಾರ್ಯಕ್ರಮಗಳಿಗೆ ಆಕರ್ಷಣೆಯ ಕೇಂದ್ರಬಿಂದುವಾಗುವುದಿಲ್ಲ. ಸದಾ ತನ್ನ ಧಿರಿಸು, ಭೂಷಣಗಳಿಂದಲೇ ನಗಿಸುತ್ತಾ ನುಗುವ ಇವರ ಜೀವನ ನಗುವಿನಿಂದ ಕೂಡಿರಲಿ.
  • ಚಂದ್ರಶೇಖರ್ ಎಸ್ ಅಂತರ

Share The Posts

Twitter Delicious Facebook Digg Stumbleupon Favorites More